| |
| |
| |
ತುರ್ತಿನ ಗರ್ಭ ನಿರೋಧಕ ಮಾತ್ರೆ(ಎಮರ್ಜೆನ್ಸಿ ಕಾಂಟ್ರಾಸೆಪ್ಟಿವ್ ಪಿಲ್ಸ್) ಅಂದರೇನು? |
| |
ತುರ್ತಿನ ಗರ್ಭ ನಿರೋಧಕ ಮಾತ್ರೆ, ಅಸಂರಕ್ಷಿತ ಸಂಭೋಗ(ಸೆಕ್ಸ್) ಅಥವಾ ಗರ್ಭ ನಿರೋಧಕ ಕಾಂಟ್ರಾಸೆಪ್ಟಿವ್ ಕೈಕೊಟ್ಟಾಗ ಉಂಟಾಗಬಹುದಾದ ಯೋಜಿಸಿಲ್ಲದ ಗರ್ಭ ಧಾರಣೆಯನ್ನು(ಪ್ರೆಗ್ನೆನ್ಸಿಯನ್ನು) ತಡೆಗಟ್ಟಲು ಸುರಕ್ಷಿತ ಹಾಗೂ ಸುಲಭ ಮಾರ್ಗವಾಗಿದೆ. |
| |
|
|
| |
|
| |
ಐ-ಪಿಲ್ ಅಂದರೇನು? |
| |
ಐ-ಪಿಲ್ ಅದೊಂದು ತುರ್ತಿನ ಗರ್ಭ ನಿರೋಧಕ ಮಾತ್ರೆಯಾಗಿದ್ದು ಇದನ್ನು ಸಿಪ್ಲಾ ತಯಾರಿಸುತ್ತಿದ್ದಾರೆ. ಐ-ಪಿಲ್ ನ ಒಂದೇ ಡೋಸ್ ಅಸಂರಕ್ಷಿತ ಸಂಭೋಗ ಅಥವಾ ಗರ್ಭ ನಿರೋಧಕ ಕೆಲಸ ಮಾಡದೇ ಇರುವುದರಿಂದ ಉಂಟಾಗಬಹುದಾದ ಬಯಸಿಲ್ಲದ ಗರ್ಭ ಧಾರಣೆಯನ್ನು ತಡೆಗಟ್ಟಲು ಸುರಕ್ಷಿತ ಹಾಗು ಸುಲಭ ಮಾರ್ಗವನ್ನು ಒದಗಿಸುತ್ತದೆ. ಐ-ಪಿಲ್ ಎಲ್ಲಾ ಕೆಮಿಸ್ಟ್ ಔಟ್ಲೆಟ್‌ಗಳಲ್ಲಿ ಪ್ರಿಸ್ಕ್ರಿಪ್ಶನ್ ಅಗತ್ಯವಿಲ್ಲದೇ ದೊರೆಯುತ್ತದೆ. |
| |
|
|
| |
| |
ಯಾವಾಗ ಐ-ಪಿಲ್ ಉಪಯೋಗಿಸುವುದು ಯೋಗ್ಯವಾಗಿರುತ್ತದೆ? |
| |
ಸಂರಕ್ಷಣೆ ಇಲ್ಲದೆ ನೀವು ಸಂಭೋಗ ನಡೆಸಿದ್ದು ಗರ್ಭ ಧಾರಣೆಯನ್ನು ತಡೆಗಟ್ಟಲು ಬಯಸುವಿರೆಂದಾದರೆ, ನೀವು ಸಾಧ್ಯವಾದಷ್ಟು ಬೇಗ ಐ-ಪಿಲ್ ಪಡೆಯಬೇಕು. ಅಸಂರಕ್ಷಿತ ಸಂಭೋಗದಿಂದ 12 ಗಂಟೆಗಳ ಒಳಗೆ ಪಡೆದರೆ ಉತ್ತಮ, 72 ಗಂಟೆಗಳಿಗಿಂತ ತಡವಾಗಬಾರದು.
ಈ ಕೆಳಗಿನ ಸಂದರ್ಭಗಳಲ್ಲಿ ಐ-ಪಿಲ್ ಬೆಂಬಲದ ಗರ್ಭ ನಿರೋಧಕ ಉಪಾಯವಾಗಿ ಚೆನ್ನಾಗಿರುತ್ತದೆ.
- ಗರ್ಭ ನಿರೋಧಕ ಕೈಕೊಟ್ಟಾಗ
- ಅಸಂರಕ್ಷಿತ ಸಂಭೋಗ ಮಾಡಿದಾಗ
- ನಿಮ್ಮ ನಿಯಮಿತ ಗರ್ಭ ನಿರೋಧಕ ಉಪಾಯವನ್ನು ಸರಿಯಾದ ಕ್ರಮದಲ್ಲಿ ಬಳಸದೇ ಇರುವಾಗ
- ಬಲಾತ್ಕಾರದ ಸಂಭೋಗ
|
| |
|
|
| |
| |
ಐ-ಪಿಲ್ ಬಳಸಲು ನಿರ್ದೇಶನಗಳು ಏನು? |
| |
ಐ-ಪಿಲ್ ಅದೊಂದು ಬಾಯಿಯ ಮೂಲಕ ಸೇವಿಸುವ ಒಂದೇ ಡೋಸಿನ ಮಾತ್ರೆ. ಇದನ್ನು ಊಟದ ನಂತರ ಒಂದು ಗ್ಲಾಸ್ ನೀರಿನೊಂದಿಗೆ ನುಂಗಬೇಕು. ಅಸಂರಕ್ಷಿತ ಸಂಭೋಗದ ಅಥವಾ ಗರ್ಭ ನಿರೋಧಕ ಕೈಕೊಟ್ಟ ನಂತರ 12 ಗಂಟೆಗಳ ಒಳಗೆ ಐ-ಪಿಲ್ ಪಡೆಯಬೇಕು ಮತ್ತು 72 ಗಂಟೆಗಳಿಗಿಂತ ತಡವಾಗಬಾರದು.
|
| |
|
|
| |
| |
ಐ-ಪಿಲ್ ಯಾವಾಗ ಉಪಯೋಗಿಸಲು ಸೂಕ್ತವಲ್ಲ? |
| |
ನೀವು ಈಗಾಗಲೇ ಗರ್ಭಿಣಿಯಾಗಿದ್ದಾರೆ, ಐ-ಪಿಲ್ ಕೆಲಸ ಮಾಡಲಾರದು. ಏಕೆಂದರೆ, ಇದು ಕೇವಲ ಒಂದು ಬೆಂಬಲದ ಅಥವಾ ತುರ್ತಿನ ಗರ್ಭ ನಿರೋಧಕ ಉಪಾಯವಷ್ಟೇ ಆಗಿದೆ. ಇದು ನಿಯಮಿತ ಗರ್ಭ ನಿರೋಧಕ ಉಪಾಯವಾಗಲು ಸೂಕ್ತವಲ್ಲ.
ಅಸಂರಕ್ಷಿತ ಸಂಭೋಗದ 72 ಗಂಟೆಗಳ ನಂತರ ಐ-ಪಿಲ್ ಪರಿಣಾಮಕಾರಿಯಾಗಿರುವುದಿಲ್ಲ. ನಿಮಗೆ ಐ-ಪಿಲ್ ನಲ್ಲಿರುವ ಔಷಧಿ ಲೆವೊನೋರ್ಜೆಸ್ಟ್ರೆಲ್‌ನ ಅಲರ್ಜಿ ಇದ್ದಲ್ಲಿ ಐ-ಪಿಲ್ ಶಿಫಾರಸು ಮಾಡಲಾಗುವುದಿಲ್ಲ. |
| |
|
|
| |
| |
ಯಾರು ಐ-ಪಿಲ್ ಬಳಸಬಹುದು? |
| |
ಗರ್ಭನಿರೋಧಕವನ್ನು ಬಳಸದೇ ಇದ್ದು ಅಥವಾ ಅದು ನಿಷ್ಫಲವಾದ ಸಂದರ್ಭದಲ್ಲಿ ಬಯಸಿಲ್ಲದ ಗರ್ಭಧಾರಣೆಯ ಸಾಧ್ಯತೆಯನ್ನು ಎದುರಿಸುತ್ತಿರುವ ಗರ್ಭ ಧರಿಸಬಲ್ಲ ಪ್ರಾಯದ ಯಾವುದೇ ಸ್ತ್ರೀಯು ಐ-ಪಿಲ್ ಬಳಸಬಹುದು. ಬಲಾತ್ಕಾರದಿಂದ ಸಂಭೋಗ ನಡೆದಾಗಲೂ ಇದನ್ನು ಉಪಯೋಗಿಸಬಹುದು. |
| |
|
|
| |
| |
ಐ-ಪಿಲ್ ಪಡೆಯುವ ಮೊದಲು ನಾನು ಡಾಕ್ಟರರಿಂದ ತಪಾಸಣೆ ಮಾಡಿಸಿಕೊಳ್ಳಬೇಕೇ? |
| |
ಐ-ಪಿಲ್ ಪಡೆಯಲು ಮೆಡಿಕಲ್ ಚೆಕ್-ಅಪ್ ಬೇಕಾಗಿಲ್ಲ. ಆದರೆ, ನಿಮಗೇನಾದರೂ ಗಂಭೀರ ವ್ಯಾಧಿ ಇದ್ದಲ್ಲಿ ಅಥವಾ ನಿಮಗೆ ಲೆವೊನೋರ್ಜೆಸ್ಟ್ರೆಲ್‌ನ ಅಲರ್ಜಿ ಇರುವುದು ತಿಳಿದಿದ್ದಲ್ಲಿ, ಡಾಕ್ಟರರ ಸಲಹೆ ಪಡೆಯುವುದು ಉತ್ತಮ.
|
| |
|
|
| |
| |
ಐ-ಪಿಲ್ ಹೇಗೆ ಕೆಲಸ ಮಾಡುತ್ತದೆ? |
| |
ನಿಮ್ಮ ಋತು ಚಕ್ರದಲ್ಲಿ ನೀವು ಎಲ್ಲಿರಬಹುದು ಎಂಬುದನ್ನು ಅನುಸರಿಸಿ ಐ-ಪಿಲ್ ಮೂರು ಬೇರೆ ಬೇರೆ ವಿಧಗಳಲ್ಲಿ ಕೆಲಸ ಮಾಡುತ್ತದೆ.
- ಇದು ಅಂಡಾಶಯದಿಂದ ಮೊಟ್ಟೆಯ ಬಿಡುಗಡೆಯನ್ನು ನಿಲ್ಲಿಸಬಹುದು.
- ಮೊಟ್ಟೆ ಈಗಾಗಲೇ ಬಿಡುಗಡೆಯಾಗಿದ್ದರೆ, ವೀರ್ಯವು ಅದನ್ನು ಫಲಪ್ರದಗೊಳಿಸದಂತೆ ಇದು ತಡೆಯಬಹುದು.
- ಮೊಟ್ಟೆ ಈಗಾಗಲೇ ಫಲಪ್ರದವಾಗಿದ್ದರೆ, ಅದು ಗರ್ಭಕೋಶದ ಲೈನಿಂಗ್‌ನೊಂದಿಗೆ ಅಂಟಿಕೊಳ್ಳಕೊಳ್ಳದಂತೆ ಇದು ತಡೆಯಬಹುದು.
ಫಲಪ್ರದವಾದ ಮೊಟ್ಟೆಯು ಗರ್ಭ ಕೋಶದ ಲೈನಿಂಗ್‌ನೊಂದಿಗೆ ಅಂಟಿಕೊಂಡಾಗ ಮಾತ್ರವೇ ಗರ್ಭ ಧಾರಣೆ ನಿಶ್ಚಿತವಾಗುತ್ತದೆ ಎಂಬ ವಿಷಯವನ್ನು ತಿಳಿದಿರುವುದು ಅಗತ್ಯ.
ಗರ್ಭ ಧಾರಣೆಯಾಗಿರುವುದು ನಿಶ್ಚಿತವಾದ ನಂತರ(ಅಂದರೆ, ಫಲಪ್ರದವಾದ ಮೊಟ್ಟೆ ಗರ್ಭಕೋಶದಲ್ಲಿ ಅಂಟಿಕೊಂಡಾಗ) ಐ-ಪಿಲ್ ನಿಂದ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಇದು ಗರ್ಭಪಾತದ ಮಾತ್ರೆಯಲ್ಲ. |
| |
|
|
| |
| |
'ತುರ್ತು ಗರ್ಭ ನಿರೋಧಕ ಮಾತ್ರೆ' ಮತ್ತು 'ಗರ್ಭಪಾತದ ಮಾತ್ರೆ' ಇವುಗಳಲ್ಲಿ ವ್ಯತ್ಯಾಸವೇನು? |
| |
ವೈದ್ಯಕೀಯ ಭಾಷೆಯಲ್ಲಿ ಫಲಪ್ರದವಾದ ಮೊಟ್ಟೆ ಗರ್ಭಕೋಶದಲ್ಲಿ ನೆಲೆಸಿದಾಗ ಅದನ್ನು ಗರ್ಭಿಣಿಯಾಗುವುದು ಎನ್ನುತ್ತಾರೆ.
ಗರ್ಭಪಾತದ ಮಾತ್ರೆಗಳಲ್ಲಿ ಆಂಟಿಪ್ರೊಜೆಸ್ಟಿನ್ಸ್ ಎಂಬ ಔಷಧಿಗಳಿರುತ್ತವೆ. ಇವು ಗರ್ಭ ಧಾರಣೆಯಾದ ನಂತರ ಬಸಿರಿನ ವಿಕಾಸವನ್ನು ನಿಲ್ಲಿಸುತ್ತದೆ.
ಆದರೆ ಐ-ಪಿಲ್ ನಂತ ತುರ್ತಿನ ಗರ್ಭ ನಿರೋಧಕ ಮಾತ್ರೆಗಳಲ್ಲಿ ಮೊದಲಾಗಿ ಗರ್ಭ ಧಾರಣೆಯನ್ನೇ ತಡೆಯಬಲ್ಲ ಸಾಮಾನ್ಯ ಫಿಮೇಲ್ ಹಾರ್ಮೋನ್‌ಗಳಿರುತ್ತವೆ. ಆದ್ದರಿಂದ ಇವು ಗರ್ಭಪಾತಕ್ಕೆ ಕಾರಣವಾಗಲಾರವು.
ಅಧಿಕ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ |
| |
|
|
| |
| |
ಐ-ಪಿಲ್ ನಿಂದ ನಾನು ಅತ್ಯುತ್ತಮ ಫಲಿತಾಂಶ ಹೇಗೆ ಪಡೆಯಲಿ? |
| |
ಅಸಂರಕ್ಷಿತ ಸಂಭೋಗ, ಅಥವಾ ಗರ್ಭ ನಿರೋಧಕ ನಿಷ್ಪಲವಾದ ನಂತರ ಎಷ್ಚು ಬೇಗ ಐ-ಪಿಲ್ ಸೇವಿಸುವಿರೋ ಅಷ್ಟೇ ಉತ್ತಮ. ಆದರೆ 72 ಗಂಟೆಗಳಿಗಿಂತ ತಡವಾಗಬಾರದು. |
| |
|
|
| |
| |
ಐ-ಪಿಲ್ ಅದೆಷ್ಟು ಪರಿಣಾಮಕಾರಿ? |
| |
ಎಷ್ಟು ಬೇಗ ಐ-ಪಿಲ್ ಸೇವಿಸುವಿರೋ ಅಷ್ಟೇ ಹೆಚ್ಚು ಅದರ ಪರಿಣಾಮವಾಗಿರುತ್ತದೆ. ಅಸಂರಕ್ಷಿತ ಸಂಭೋಗದ ನಂತರ 24 ಗಂಟೆಗಳ ಒಳಗೆ ಸೇವಿಸಿದರೆ ಇದು 95% ಪರಿಣಾಮಕಾರಿಯಾಗಿರುತ್ತದೆ,25-48 ಗಂಟೆಗಳ ಒಳಗೆ 85% ಮತ್ತು 49-72 ಗಂಟೆಗಳ ಒಳಗೆ 58% ಪರಿಣಾಮಕಾರಿಯಾಗಿರುತ್ತದೆ. ಆದರೆ ನಿಮ್ಮ ಮುಟ್ಟು ಒಂದು ವಾರಕ್ಕಿಂತ ಹೆಚ್ಚು ದೂರವಾದರೆ ನೀವು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಬೇಕು ಮತ್ತು ನಿಮ್ಮ ಡಾಕ್ಟರರನ್ನು ಸಂಪರ್ಕಿಸಬೇಕು. |
| |
|
|
| |
| |
ಐ-ಪಿಲ್ ನಿಂದ ನನಗೇನಾದರೂ ಪಾರ್ಶ್ವ ಪರಿಣಾಮಗಳು ಬರಬಹುದೇ? |
| |
ಐ-ಪಿಲ್ ನಿಂದ ಬಹುಕಾಲ ಉಳಿಯುವ ಅಥವಾ ಗಂಭೀರವೆನಿಸುವ ಯಾವುದೇ ಪಾರ್ಶ್ವ ಪರಿಣಾಮಗಳಿಲ್ಲ ಮತ್ತು ಇದು ಹೆಚ್ಚು-ಕಡಿಮೆ ಎಲ್ಲಾ ಸ್ತ್ರೀಯರಿಗೂ ಬಳಕೆಗೆ ಸುರಕ್ಷಿತವಾಗಿದೆ.
ಪಿತ್ತೋದ್ರೇಕ, ವಾಂತಿ ಮತ್ತು ತಲೆ ನೋವು, ಇವು ಐ-ಪಿಲ್ ಸೇವಿಸಿದಾಗ ತೋರಿಬರುವ ಕೆಲವು ಸಾಮಾನ್ಯ ಪಾರ್ಶ್ವ ಪರಿಣಾಮಗಳು. ನಿಮಗೆ ಕೆಳ ಹೊಟ್ಟೆಯ ನೋವು ಕೂಡ ಕೆಲವೊಮ್ಮೆ ತೋರಿಬರಬಹುದು. ಅಥವಾ ಸ್ತನಗಳು ಸಾಮಾನ್ಯಕ್ಕಿಂತ ಮೃದುವಾಗಿರುವುದನ್ನು ನೀವು ಗಮನಿಸಬಹುದು. ಇವೆಲ್ಲವೂ ಒಂದೆರಡು ದಿನಗಳಲ್ಲಿ ಸರಿಹೋಗುತ್ತದೆ. ಅಕಸ್ಮಾತ್ತಾಗಿ ಯೋನಿಯಲ್ಲಿ ಸ್ರಾವ ಉಂಟಾಗಬಹುದು.ಆದರೆ ಇದರಿಂದೇನೂ ಅಪಾಯವಿಲ್ಲ. ಮುಂದಿನ ತಿಂಗಳು ನಿಮಗೆ ಮುಟ್ಟು ಬರುವಷ್ಟರಲ್ಲಿ ಅದು ನಿಂತುಬಿಡುತ್ತದೆ. ಐ-ಪಿಲ್ ನಿಂದಾಗಿ ನಿಮ್ಮ ಮುಂದಿನ ಮುಟ್ಟು ಸಾಮಾನ್ಯಕ್ಕಿಂತ ಬೇಗನೇ ಬರುವುದು ಅಥವಾ ತಡವಾಗುವುದು ಸಾಧ್ಯವಿದೆ.ಆದರೆ ನಿಮ್ಮ ಮುಟ್ಟು ಒಂದು ವಾರಕ್ಕಿಂತ ದೂರ ಹೋದರೆ ನೀವು ಪ್ರೆಗ್ನೆನ್ಸಿಟೆಸ್ಟ್ ಮಾಡಿಸಿಕೊಳ್ಳಬೇಕು ಮತ್ತು ನಿಮ್ಮ ಡಾಕ್ಟರರನ್ನು ಸಂಪರ್ಕಿಸಬೇಕು. ಐ-ಪಿಲ್ ನಿಂದ ದೀರ್ಘ ಸ್ಠಾಯಿ ಪರಿಣಾಮವಿರಲಾರದು ಮತ್ತು ಭವಿಷ್ಯತ್ತಿನ(ಮತ್ತು ಬಯಸಿದ) ಗರ್ಭ ಧಾರಣೆಗಳಲ್ಲಿ ತೊಂದರೆ ಬರಲಾರದು.
ನಿಮಗೆ ಐ-ಪಿಲ್ ನಲ್ಲಿರುವ ಔಷಧಿ ಲೆವೊನೋರ್ಜೆಸ್ಟ್ರೆಲ್‌ನ ಅಲರ್ಜಿ ಇದ್ದಲ್ಲಿ ಐ-ಪಿಲ್ ಶಿಫಾರಸು ಮಾಡಲಾಗುವುದಿಲ್ಲ. |
| |
|
|
| |
| |
ಐ-ಪಿಲ್ ಬಳಸುವ ಮೊದಲು ಅದರ ಬಗ್ಗೆ ಎಚ್ಚರಿಕೆಯ ವಿಷಯಗಳೇನಾದರೂ ನಾನು ಅರಿಯಬೇಕೇ? |
| |
ಐ-ಪಿಲ್ ಪಡೆಯುವ ಮೊದಲು ನಿಮಗೆ ಈ ಕೆಳಗಿನ ವಿಷಯಗಳು ತಿಳಿದಿರಬೇಕು:
- ಅಸಂರಕ್ಷಿತ ಸಂಭೋಗ ಅಥವಾ ಗರ್ಭ ನಿರೋಧಕ ಕೆಲಸ ಮಾಡದೇ ಇರಬಹುದಾದ ಸಂದರ್ಭಗಳ ನಂತರ ಎಷ್ಟು ಬೇಗನೇ ಐ-ಪಿಲ್ ಪಡೆಯುವಿರೋ ಅಷ್ಟೇ ಅದು ಪರಿಣಾಮಕಾರಿಯಾಗಿರುತ್ತದೆ. ಆದರೆ ಇದು 72 ಗಂಟೆಗಳಿಗೆ ಮೀರಬಾರದು.
- ನೀವು ಈಗಾಗಲೇ ಗರ್ಭಿಣಿಯಾಗಿದ್ದರೆ ಐ-ಪಿಲ್ ನಿಂದ ಏನೂ ಪ್ರಯೋಜನವಾಗಲಾರದು.
- ಇದನ್ನು ನಿಯಮಿತ ಗರ್ಭ ನಿರೋಧಕ ಮಾತ್ರೆಯಾಗಿ ಬಳಸಬಾರದು.
- ಐ-ಪಿಲ್ ನಿಮಗೆ ಎಚ್ಐವಿ-ಏಡ್ಸ್ ಅಥವಾ ಇತರ ಲೈಂಗಿಕವಾಗಿ ಹರಡಿಕೊಳ್ಳುವ ರೋಗಗಳಿಂದ(ಎಸ್‌ಟಿಡಿ) ಸಂರಕ್ಷಣೆ ನೀಡಲಾರದು.
|
| |
|
|
| |
| |
ಐ-ಪಿಲ್ ಕಾರ್ಯವೆಸಗಿದೆ ಎಂದು ನನಗೆ ತಿಳಿಯುವುದಾದರೂ ಹೇಗೆ? |
|
ಐ-ಪಿಲ್ ಕೆಲಸ ಮಾಡಿದೆಯೇ ಇಲ್ಲವೆಂಬುದನ್ನು ಅರಿಯಲು ನಿಶ್ಚಿತವಾದ ಪುರಾವೆ ಅಥವಾ ಲಕ್ಷಣಗಳು ಏನೂ ದೊರೆಯಲಾರವು.ಐ-ಪಿಲ್ ಪಡೆದ ನಂತರ,ನೀವು ಕಾದು ನಿರೀಕ್ಷಿಸಬೇಕಾಗುತ್ತದೆ. ನಿಮ್ಮ ಮುಂದಿನ ಮುಟ್ಟನ್ನು ನೀವು ನಿರೀಕ್ಷಿಸದ ಸಮಯದಲ್ಲೇ ಪಡೆಯಬಹುದು ಅಥವಾ ಅದರಿಂದ ಒಂದು ವಾರ ಹೆಚ್ಚು ಕಡಿಮೆಯಾಗಬಹುದು. ನಿಮ್ಮ ಮುಟ್ಚು ಒಂದು ವಾರಕ್ಕಿಂತ ಹೆಚ್ಚು ತಡವಾದಲ್ಲಿ ಒಂದು ಪ್ರೆಗ್ನೆನ್ಸಿಟೆಸ್ಟ್ ಮಾಡಿಸಿ ಡಾಕ್ಟರರ ಸಲಹೆ ಪಡೆಯುವುದು ಉತ್ತಮ. |
| |
|
|
| |
|
| |
ನಿಯಮಿತ ಗರ್ಭ ನಿರೋಧನೆಗಾಗಿ ನಾನು ಐ-ಪಿಲ್ ಬಳಸಬಹುದೇ? |
| |
ಇಲ್ಲ. ನಿಯಮಿತ ಗರ್ಭ ನಿರೋಧನೆಗೆ ಐ-ಪಿಲ್ ಶಿಫಾರಸು ಮಾಡಲಾಗುವುದಿಲ್ಲ. ಅಸಂರಕ್ಷಿತ ಸಂಭೋಗ ಅಥವಾ ಗರ್ಭ ನಿರೋಧಕ ನಿಷ್ಫಲವಾದ ನಂತರ ಇದನ್ನು ಬೆಂಬಲದ ಉಪಾಯವಾಗಿ ಬಳಸಿದಾಗ ಮಾತ್ರವೇ ಇದು ಪರಿಣಾಮಕಾರಿಯಾಗಿರುತ್ತದೆ. ನಿಮ್ಮ ನಿಯಮಿತ ಗರ್ಭ ನಿರೋಧಕದ ಬದಲಿಗೆ ಐ-ಪಿಲ್ ಬಳಸದ ಖಾತರಿ ಮಾಡಿಕೊಳ್ಳಿರಿ. |
| |
|
|
| |
|
| |
ನಾನು ಐ-ಪಿಲ್ ಎಷ್ಟು ಬಾರಿ ಉಪಯೋಗಿಸಬಹುದು ಅಥವಾ ನಾನು ಐ-ಪಿಲ್ ಅನ್ನುಪದೇ ಪದೇ ಬಳಸಬಹುದೇ? |
| |
ಐ-ಪಿಲ್ ಅನ್ನು ಒಂದು ಋತು ಚಕ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಉಪಯೋಗಿಸಬಹುದು.ಆದರೆ ಇದನ್ನು ಕೇವಲ ತುರ್ತಿನ ಗರ್ಭ ನಿರೋಧಕವಾಗಿ ಬಳಸಲಿಕ್ಕೆ ಶಿಫಾರಸು ಮಾಡಲಾಗುತ್ತದೆ.
ನಿಯಮಿತ ಗರ್ಭ ನಿರೋಧಕವಾಗಿ ಐ-ಪಿಲ್ ಏಕೆ ಬಳಸಬಾರದೆಂಬುದಕ್ಕೆ ಹಲವಾರು ತರ್ಕಬದ್ಧ ಕಾರಣಗಳಿವೆ:
- ಪದೇ ಪದೇ ಇಸಿ ಬಳಸುವುದಕ್ಕಿಂತ ಗರ್ಭ ನಿರೋಧನೆಯ ಯಾವುದೇ ಇತರ ಉಪಾಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ;
- ದೀರ್ಘಾವಧಿಯವರೆಗೆ ಇದನ್ನು ಅತಿರೇಕವಾಗಿ ಬಳಸುವುದರಿಂದ ಋತು ಚಕ್ರ ಅನಿಯಮಿತವಾಗಬಹುದು;
- ಪಿತ್ತೋದ್ರೇಕ ಮತ್ತು ವಾಂತಿಯಂಥ ಬೇಸರ ತರಿಸುವಂಥ ಪಾರ್ಶ್ವ ಪರಿಣಾಮಗಳು ಉಂಟಾಗಬಹುದು.
ಅನಿಯೋಜಿತ ಗರ್ಭಧಾರಣೆಯನ್ನು ತಡೆಗಟ್ಟಲು ನಿಮ್ಮ ನಿಯಮಿತ ಪದ್ಧತಿಯನ್ನೇ ಮುಂದುವರಿಸುತ್ತಿರುವ ಖಾತರಿ ಮಾಡಿಕೊಳ್ಳಿ.
|
| |
|
|
| |
|
| |
ಈಗಾಗಲೇ ನಾನು ಗರ್ಭಿಣಿಯಾಗಿದ್ದು ಐ-ಪಿಲ್ ಬಳಸಿದರೆ ಆಗೇನಾಗುತ್ತದೆ? |
| |
ನೀವು ಈಗಾಗಲೇ ಗರ್ಭಿಣಿಯಾಗಿದ್ದರೆ, ಐ-ಪಿಲ್ ಕೆಲಸ ಮಾಡಲಾರದು. ಗರ್ಭಿಣಿಯಾಗಿದ್ದಾಗ ನೀವು, ಐ-ಪಿಲ್ ಪಡೆದರೆ ಅದರಿಂದ ನಿಮಗಾಗಲೀ ನಿಮ್ಮ ಭ್ರೂಣಕ್ಕಾಗಲೀ ಯಾವುದೇ ಹಾನಿಯಾಗಲಾರದು. |
| |
|
|
| |
|
| |
ನನ್ನ ಮುಟ್ಟು ಒಂದು ವಾರಕ್ಕಿಂತ ಹೆಚ್ಚು ಮುಂದುವರಿದರೆ ಮತ್ತು ನನಗೆ ತೀವ್ರವಾದ ಕಿಬ್ಬೊಟ್ಟೆ ನೋವು ಇದ್ದಲ್ಲಿ ನಾನೇನು ಮಾಡಲಿ? |
| |
ಇಂಥ ಸಂದರ್ಭದಲ್ಲಿ ನೀವು ತಕ್ಷಣ ನಿಮ್ಮ ಡಾಕ್ಟರರನ್ನು ಸಂಪರ್ಕಿಸುವುದು ಕ್ಷೇಮ. ಏಕೆಂದರೆ, ಇದಕ್ಕೆ ತಕ್ಷಣ ವೈದ್ಯಕೀಯ ಉಪಚಾರ ಬೇಕಾಗಬಹುದು. |
| |
|
|
| |
|
| |
ಮುಂದಿನ ಋತು ಚಕ್ರದ ವರೆಗೆ ಪರಿಣಾಮಕಾರಿ ಗರ್ಭ ನಿರೋಧಕ ಉಪಾಯವಾಗಿ ಐ-ಪಿಲ್ ಕೆಲಸ ಮಾಡಬಲ್ಲುದೇ? |
| |
ಇಲ್ಲವೇ ಇಲ್ಲ. ನೀವು ಐ-ಪಿಲ್ ಪಡೆದ ನಂತರ ಮುಂದಿನ ಋತು ಚಕ್ರದವರೆಗೂ, ಪ್ರತಿಬಾರಿ ಸಂಭೋಗ ಮಾಡುವಾಗ ತಪ್ಪದೇ ಕಾಂಡಮ್, ಸ್ಪರ್ಮಿಸೈಡ್ ಅಥವಾ ಸರ್ವೈಕಲ್ ಕ್ಯಾಪ್ ಮುಂತಾದ ಬ್ಯಾರಿಯರ್ ಕಂಟ್ರಾಸೆಪ್ಟಿವ್ ಬಳಸಲು ಮರೆಯದಿರಿ. |
| |
|
|
| |
|
| |
ಅಲ್ಪ ಅವಧಿಯಲ್ಲಿ ನಾನು ಹಲವಾರು ಬಾರಿ ಸಂಭೋಗ ನಡೆಸಿದ್ದರೆ ಐ-ಪಿಲ್ ಪರಿಣಾಮಕಾರಿಯಾಗಿರುವುದೇ? |
| |
ಹೌದು, ಅಲ್ಪ ಅವಧಿಯಲ್ಲಿ ನೀವು ಹಲವಾರು ಬಾರಿ ಸಂಭೋಗ ನಡೆಸಿದಲ್ಲಿ ಐ-ಪಿಲ್ ಒಂದೇ ಸಮಾನ ಪರಿಣಾಮಕಾರಿಯಾಗಿರುತ್ತದೆ. ಆದರೆ ಇಂಥ ಎಲ್ಲಾ ಸಂಭೋಗಗಳು ಐ-ಪಿಲ್ ಪಡೆಯುವ ಮೊದಲಿನ 72 ಗಂಟೆಗಳಲ್ಲಿ ಆಗಿರಬೇಕೆಂಬ ಬಗ್ಗೆ ಎಚ್ಚರಿಕೆ ಇರಲಿ. |
| |
|
|
| |
|
| |
ಮುಂದಿನ ಕೆಲವು ದಿನಗಳಲ್ಲಿ ಪುನಃ ಸಂಭೋಗದ ಅವಕಾಶವಿದೆ ಎಂದು ನನಗೆ ತಿಳಿದಿದ್ದರೆ (ವಾರಾಂತ್ಯ, ರಜಾ ದಿನ ಇತ್ಯಾದಿ ಕಾರಣಗಳಿಂದಾಗಿ), ನಾನು ಮಾತ್ರೆ ಸೇವಿಸುವುದನ್ನು ಸ್ವಲ್ಪ ಮುಂದೂಡಬಹುದೇ? ಅಥವಾ ಆ ಅವಧಿಯಲ್ಲಿ ಪ್ರತಿ ಬಾರಿ ಸಂಭೋಗ ಮಾಡಿದಾಗಲೂ ಮಾತ್ರೆ ತೆಗೆದುಕೊಳ್ಳಲೇ ಬೇಕೇ? |
| |
ಐ-ಪಿಲ್ ಅದೊಂದು ತುರ್ತಿನ ಗರ್ಭ ನಿರೋಧಕ. ಸಂಭೋಗ ಸುನಿಯೋಜಿತವಾದಲ್ಲಿ ಗರ್ಭ ನಿರೋಧನೆಯೂ ಸುನಿಯೋಜಿತವಾಗಿರಬೇಕು. ಗರ್ಭಿಣಿಯಾಗುವುದು ನಿಮಗೆ ಇಷ್ಟವಿಲ್ಲವೆಂದಾದರೆ ನಿಯಮಿತ ಗರ್ಭ ನಿರೋಧಕವನ್ನೇ ಬಳಸಬೇಕೆಂದು ಬಲವಾಗಿ ಶಿಫಾರಸು ಮಾಡಲಾಗುತ್ತದೆ. ಇದರ ಬಗ್ಗೆ ನಿಮ್ಮ ಡಾಕ್ಟರರನ್ನು ದಯವಿಟ್ಟು ವಿಚಾರಿಸಿರಿ. |
| |
|
|
| |
|
| |
ನಾನು ಐ-ಪಿಲ್ ಬಳಸಿದ ನಂತರ ಯಾವಾಗ ನನಗೆ ಮುಟ್ಟು ಬರುತ್ತದೆ? |
| |
ನಿಮ್ಮ ಮುಂದಿನ ಮುಟ್ಟು ಸಮಯಕ್ಕೆ ಸರಿಯಾಗಿಯೇ ಬರಬೇಕು. ಆದರೆ ಕೆಲವು ದಿನ ಹಿಂದೆ ಮುಂದೆ ಆಗುವುದೂ ಸಾಧ್ಯವಿದೆ. ನಿಮ್ಮ ಮುಟ್ಟು ಒಂದು ವಾರಕ್ಕಿಂತ ಹೆಚ್ಚು ಮುಂದೆ ಹೋದರೆ, ದಯವಿಟ್ಟು ಒಂದು ಪ್ರೆಗ್ನೆನ್ಸಿಟೆಸ್ಟ್ ಮಾಡಿಸಿರಿ ಮತ್ತು ನಿಮ್ಮ ಡಾಕ್ಟರರನ್ನು ಸಂಪರ್ಕಿಸಿರಿ. |
| |
|
|
| |
|
| |
ಎಚ್ಐವಿ-ಏಡ್ಸ್‌ನಂಥ ಲೈಂಗಿಕವಾಗಿ ಒಬ್ಬರಿಂದೊಬ್ಬರಿಗೆ ಹರಡಬಲ್ಲ ರೋಗಗಳಿಂದ(STDs) ಐ-ಪಿಲ್ ಸಂರಕ್ಷಣೆ ನೀಡುವುದೇ? |
| |
ಖಂಡಿತ ಇಲ್ಲ. ಐ-ಪಿಲ್ ನಿಮಗೆ ಎಚ್ಐವಿ-ಏಡ್ಸ್ ಅಥವಾ ಬೇರೆ ಯೂವುದೇ ಲೈಂಗಿಕವಾಗಿ ಒಬ್ಬರಿಂದೊಬ್ಬರಿಗೆ ಹರಡುವ ರೋಗಗಳ ವಿರುದ್ದ ಸಂರಕ್ಷಣೆ ನೀಡುವುದಿಲ್ಲ. ಎಸ್‌ಟಿಡಿಗಳಿಂದ ನಿಮ್ಮ ಸಂರಕ್ಷಣೆಗಾಗಿ ಕಾಂಡಮ್ ಬಳಸಿರಿ. |
| |
|
|
| |
|
| |
ನಾನು ಎದೆ ಹಾಲು ಉಣಿಸುತ್ತಿದ್ದರೂ ಐ-ಪಿಲ್ ಸೇವಿಸಬಹುದೇ? |
| |
ಎದೆಹಾಲು ಉಣಿಸುತ್ತಿರುವ ಅವಧಿಯಲ್ಲೂ ಐ-ಪಿಲ್ ಸುರಕ್ಷಿತವಾಗಿದೆ ಮತ್ತು ಶಿಶುವಿನ ಮೇಲೆ ದುಷ್ಪರಿಣಾಮವಾಗುವಂತೆ ಯಾವ ಗಮನೀಯ ಪರಿಣಾಮವನ್ನೂ ಇದು ಬೀರಲಾರದು. |
| |
|
|
| |
|
| |
ಒಂದು ಪಕ್ಷ ತುರ್ತಿನ ಗರ್ಭ ನಿರೋಧಕ ಕೆಲಸ ಮಾಡದಿದ್ದರೆ ನಾನು ನನ್ನ ಬಸಿರನ್ನು ಮುಂದುವರಿಸಿಕೊಂಡು ಹೋಗುವುದು ಕ್ಷೇಮವೇ? |
| |
ನೀವು ಇಚ್ಚಿಸಿದರೆ ಬಸಿರನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಐ-ಪಿಲ್ ನಲ್ಲಿ ಬಳಸಲಾಗಿರುವ ಔಷಧಿಯು ನಿಮಗಾಗಲೀ ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗಾಗಲಿ ಯಾವ ಹಾನಿಯನ್ನೂ ಮಾಡಲಾರದು. ಗರ್ಭವನ್ನು ನೀವು ಬಯಸುತ್ತಿಲ್ಲವೆಂದಾದರೆ ಮಾತ್ರ ಡಾಕ್ಟರರ ಸಲಹೆ ಪಡೆಯಿರಿ. |
| |
|
|
| |
|
| |
ವ್ಯಾಧಿಯೊಂದರಿಂದ ನಾನು ಪೀಡಿತನಾಗಿದ್ದು ಅದಕ್ಕಾಗಿ ದೀರ್ಘ ಕಾಲದ ವರೆಗೆ ಔಷಧೋಪಚಾರ ಪಡೆಯುತ್ತಿದ್ದರೆ (ಉಬ್ಬಸ, ಹೈಬ್ಲಡ್ ಪ್ರೆಶರ್, ಡಯಾಬಿಟಿಸ್, ಟ್ಯುಬರ್ಕ್ಯುಲೋಸಿಸ್, ಎಚ್ಐವಿ-ಏಡ್ಸ್, ಇತ್ಯಾದಿ) ನನಗೆ ಐ-ಪಿಲ್ ಸುರಕ್ಷಿತವೇ? |
| |
ಇಂಥ ಪರಿಸ್ಥಿತಿಗಳಲ್ಲಿ ಡಾಕ್ಟರರ ಸಲಹೆ ಪಡೆಯುವುದು ಉತ್ತಮ. |
| |
|
|
| |
|
| |
ಐ-ಪಿಲ್ ಸೇವಿಸಿದ ನಂತರ ನನಗೆ ವಾಂತಿಯಾಗಿದೆ. ಇನ್ನೂ ಒಂದು ಮಾತ್ರೆ ಸೇವಿಸಲೇ? |
| |
ಮಾತ್ರೆ ಪಡೆದ ಮೂರು ಗಂಟೆಗಳ ಒಳಗೆ ವಾಂತಿಯಾದರೆ ಆದಷ್ಟು ಬೇಗ ನೀವು ಇನ್ನೊಂದು ಮಾತ್ರೆ ಸೇವಿಸಬೇಕು ಈ ಬಾರಿ ಯಾವುದಾದರೂ ಆಂಟಿ-ಅಮೆಟಿಕ್‌ನೊಂದಿಗೆ (ವಾಂತಿ ಮತ್ತು ಪಿತ್ತೋದ್ರೇಕದ ವಿರುದ್ದ ಪರಿಣಾಮಕಾರಿಯಾಗಿರುವ ಔಷಧಿ) ಪಡೆದರೆ ಉತ್ತಮ. ಖಾಲಿ ಹೊಟ್ಟೆಯಲ್ಲಿ ಐ-ಪಿಲ್ ಪಡೆಯದೇ ಇದ್ದರೆ ವಾಂತಿಯಾಗುವ ಸಾಧ್ಯತೆ ಕಡಿಮೆ. |
| |
|
|
| |
|
| |
ನಾನು ನನ್ನ ನಿತ್ಯದ ಗರ್ಭ ನಿರೋಧಕ ಮಾತ್ರೆಗಳನ್ನು ಯಾವಾಗಿಂದ ಪಡೆಯಲು ಆರಂಭಿಸಬೇಕು? |
| |
ನೀವು ಈಗಾಗಲೇ ಬಳಸುತ್ತಿದ್ದ ಗರ್ಭ ನಿರೋಧಕವನ್ನು ಆರಂಭಿಸುವಿರೆಂದಾದರೆ ಅಥವಾ ಹೊಸತನ್ನು ಪ್ರಯತ್ನಿಸುವಿರೆಂದಾದರೆ ಐ-ಪಿಲ್ ಪಡೆದ ಮರುದಿನದಿಂದ ಆರಂಭಿಸಬಹುದು. ಆದರೆ, ಡಾಕ್ಟರರೊಂದಿಗೆ ವಿಚಾರ-ವಿಮರ್ಷೆ ಮಾಡಿ ನಿಮಗೆ ಯೋಗ್ಯವಾದ ಗರ್ಭ ನಿರೋಧಕದ ಬಗ್ಗೆ ಪುನರಾವಲೋಕನ ಮಾಡಲು ಇದೇ ತಕ್ಕ ಸಮಯ. |
| |
|
| |
|